ಮಕ್ಕಳು ಯೋಚಿಸುವ ರೀತಿಯನ್ನು ಊಹಿಸುವುದೂ ಕಷ್ಟ. ಇದಕ್ಕೊಂದು ಉತ್ತಮ ಉದಾಹರಣೆ ನನ್ನ ತಂಗಿಯ ಮಗನ ಡಬ್ಬದ ಹೊರಗಿನ ಯೋಚನೆ (ಅದೇ, "thinking outside the box" ಕಣ್ರೀ!)
ಒಂದು ದಿನ ಶಾಲೆಯಿಂದ ಮನೆಗೆ ಬರುವಾಗ ಒಂದು ಒಂಟೆಯನ್ನು ನೋಡಿದ. ಮಕ್ಕಳಿಗೆ ಸಹಜವಾಗಿ ಎಲ್ಲಾ ವಿಷಯಗಳ ಮೇಲೂ ಕುತೂಹಲ. "ಅದೇನಮ್ಮ?" "ಅದು ಒಂಟೆ ಕಣಪ್ಪಾ".
ಮಾರನೆಯ ದಿನ ಅದೇ ಜಾಗದಲ್ಲಿ ಮೂರು ಒಂಟೆಗಳು ಹೋಗುತ್ತಿದ್ದವು. ತಕ್ಷಣ ಅವನ ಬಾಯಿಯಿಂದ ಹೊರಟೇ ಬಿಟ್ಟಿತ್ತು: "ಒಂಟೆ, ಟೂಟೇ, ತ್ರೀಟೇ" ("one-tay, two-tay, three-tay"). ಹೇಗಿದೆ? ಹೊಟ್ಟೆ ಹುಣ್ಣಾಗುವಷ್ಟು ನಗುತ್ತಿದ್ದ ನನ್ನ ತಂಗಿಯ ಸ್ಕೂಟಿ ಬೀಳದೆ ಇದ್ದದ್ದೇ ಆಶ್ಚರ್ಯ.
Makkala nishkalmashavaada yochaneya olle udaharaNe. http://ananthnarayan.blogspot.com/2006/06/innocence-of-kids.html is another such example.
ReplyDelete