Wednesday, September 17, 2008

Chitranna Chitranna

ನಾನು ಸಾಧಾರಣವಾಗಿ ಸುಮಧುರ, ಮಂದಗತಿಯ, ಉತ್ತಮ ಸಾಹಿತ್ಯವಿರುವ ಹಾಡುಗಳನ್ನೇ ಕೇಳಲು ಇಷ್ಟ ಪಡುತ್ತೇನೆ. ಒಮ್ಮೊಮ್ಮೆ ಇದಕ್ಕೆ ತದ್ವಿರುದ್ಧವಾದ, 'ಗಲಾಟೆ' ತುಂಬಿರುವ ಹಾಡುಗಳೂ ಇಷ್ಟವಾಗುತ್ತವೆ. ಆದರೆ ಇಂಥಹ ಹಾಡುಗಳು ಬಹಳ ದಿನವೇನೂ favourite ಆಗಿ ಉಳಿಯುವುದಿಲ್ಲ. 'ಮುಂಗಾರು ಮಳೆ'ಯ ನಂತರ ಹೆಚ್ಚಿನ ಸಂಗೀತ ನಿರ್ದೇಶಕರು ಅದೇ 'ಫಾರ್ಮುಲ' ಅನುಸರಿಸಿ ಮಧುರ ಗೀತೆಗಳನ್ನು ನೀಡಲು ಪ್ರಯತ್ನಿಸುತ್ತಿರುವುದರಿಂದ ಕನ್ನಡದಲ್ಲಿ ನನಗೆ ಇಷ್ಟ ಆಗುವ fast beats ಇರುವ ಹಾಡುಗಳೇ ಬಂದಿರಲಿಲ್ಲ. ಆದರೆ ಕಳೆದ ವಾರದಿಂದ ಚಿತ್ರಾನ್ನ ಚಿತ್ರಾನ್ನ ಹಾಡು ನನ್ನ ಮನಸ್ಸನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಇದರ ಟ್ಯೂನ್ ನಲ್ಲಿ ಒಂಥರಾ ಆಕರ್ಷಣೆ ಇದೆ. ಎಲ್ಲಾ ರೇಡಿಯೋ ಸ್ಟೇಷನ್ ಗಳೂ ಈ ಹಾಡನ್ನು ದಿನಕ್ಕೆ ನೂರು ಸಲ ಹಾಕಿ ಇದರ ಮೇಲೆ ವಾಕರಿಕೆ ಬರುವಂತೆ ಮಾಡುವುದು ಗ್ಯಾರೆಂಟಿ. ಆದರೆ ಅಲ್ಲಿಯವರೆಗೆ ಈ 'different' ಹಾಡು ನನಗಿಷ್ಟ.

1 comment: