Saturday, February 20, 2010

ಈ ಜಾಹೀರಾತಿನಲ್ಲಿ ಹಿಂದಿ ಬೇಕೇ?


MOIA (ಮಿನಿಸ್ಟ್ರಿ ಆಫ್ ಒವೆರ್ಸೀಸ್ ಅಫೇರ್ಸ್) ನವರು ಕಳೆದ ವಾರ ಕನ್ನಡ ದಿನಪತ್ರಿಕೆಗಳಲ್ಲಿ ಈ ಜಾಹೀರಾತು/ಸಂದೇಶವನ್ನು ಪ್ರಕಟಿಸಿದರು. ಇದರಲ್ಲಿರುವ ಹಿಂದಿ ಸಂದೇಶವನ್ನು ಕಂಡು ಕಂಡು ನನಗೆ ನಿಜಕ್ಕೂ ನಗು ಬಂತು. ಇದನ್ನು ವಿನ್ಯಾಸ ಮಾಡಿದವರಿಗೆ ಜಾಹೀರಾತುಗಳ ಮೂಲ ಉದ್ದೇಶವೇ ತಿಳಿದಿಲ್ಲ ಎನಿಸುತದೆ. ಸಾಮಾನ್ಯ ಜನರಿಗೂ ತಿಳಿದಿರುವಂತೆ ಜಾಹೀರಾತುಗಳೇ ಮುಖ್ಯ ಉದ್ದೇಶ ತಮ್ಮ "target audience" ನಲ್ಲಿ ಸಾಧ್ಯವಾದಷ್ಟೂ ಹೆಚ್ಚು ಜನರನ್ನು ತಲುಪುವುದು. ಇದೇ ಉದ್ದೇಶದಿಂದ MOIA ನವರು ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಪ್ರಾದೇಶಿಕ ದಿನಪತ್ರಿಕೆಗಲ್ಲಿ ೧/೪ ಪುಟಗಳ ಜಾಹೀರಾತನ್ನು ಪ್ರಕಟಿಸಿದ್ದಾರೆ. ಆದರೆ ಕನ್ನಡ ದಿನಪತ್ರಿಯಲ್ಲಿ ಜಾಹೀರಾತನ್ನು ಪ್ರಕಟಿಸುವಾಗ ಆ ಸಂದೇಶ ಕನ್ನಡದಲ್ಲಿರುವುದೇ ಉತ್ತಮ ಎಂಬ ಸಾಮಾನ್ಯ ಜ್ಞಾನವೂ ಇಲ್ಲದೆ ಹೋಯಿತೇ? ಈ ಸಂದೇಶವನ್ನು ಕನ್ನಡಕ್ಕೆ ತರ್ಜುಮೆ ಮಾಡುವುದು ಅಷ್ಟೊಂದು ಕಷ್ಟವೇ? ಅಥವಾ ಸೋಂಬೇರಿತನವೇ? ಅಥವಾ ಕೇಂದ್ರ ಸರ್ಕಾರದ ಜಾಹೀರಾತುಗಳಲ್ಲಿ ಹೇಗಾದರೂ ಹಿಂದಿಯನ್ನು ತುರುಕಲೇ ಬೇಕು ಎಂಬ ನಿಯಮವಿದೆಯೇ?

Update: ಫರ್ಜಿ ಏಜೆಂಟ ಅಂದರೆ ಏನು? ನಿಜಕ್ಕೂ ನನಗೆ ಗೊತ್ತಿಲ್ಲ.

No comments:

Post a Comment