Update 8-Jun: Translation posted.
ಅದೊಂದು ಶನಿವಾರ. ಬಹಳ ದಿನಗಳಿಂದ ಬಾಕಿ ಇದ್ದ ಕೆಲಸಗಳನ್ನು ಮುಗಿಸುತ್ತಿದ್ದ ನಾನು ಹಾಗೆಯೇ ಒಂದು ಶೂ ಖರೀದಿಸಬೇಕಿರುವುದು ನೆನಪಾಗಿ ಎದುರಿಗೇ ಇದ್ದ ಶೂ ಅಂಗಡಿಯನ್ನು ಹೊಕ್ಕೆ.
ಎರಡು ಮಹಡಿಗಳಲ್ಲಿ ಹರಡಿಕೊಂಡಿದ್ದ ಈ ಶೂ ಅಂಗಡಿಯ ನೆಲ ಮಹಡಿಯಲ್ಲಿ ಅಂಗಡಿಯ ಮಾಲೀಕನನ್ನು ಬಿಟ್ಟು ಬೇರೆ ಯಾರೂ ಇರಲಿಲ್ಲ. ಸಾಮಾನ್ಯವಾಗಿರುವಂತೆ ಗಂಡಸರ ಶೂ ವಿಭಾಗ ಮೇಲಿನ ಮಹಡಿಯಲ್ಲಿತ್ತು (ಕಾರಣ ಗೊತ್ತಲ್ಲವೇ? ;-)). ಮೇಲೆ ಬರುತ್ತಿದ್ದಂತೆ ಒಂದಿಬ್ಬರು ಗ್ರಾಹಕರು ಮತ್ತು ಒಬ್ಬ ಮಾರಾಟಗಾರ (ಸೇಲ್ಸ್ ಬಾಯ್ ) ಕಾಣಿಸಿದರು. ನಾನು ನನ್ನ ಪಾಡಿಗೆ ಶೂಗಳನ್ನು ನೋಡುವುದರಲ್ಲಿ ಮಗ್ನನಾದೆ. 5-10 ನಿಮಿಷಗಳಲ್ಲಿ ಮಾರಾಟಗಾರ ಉಳಿದ ಗ್ರಾಹಕರಿಗೆ ಬೇಕಾದ ವಸ್ತುಗಳನ್ನು ಕೊಟ್ಟು, ಆ ವಸ್ತುಗಳನ್ನು ನೆಲಮಹಡಿಯಲ್ಲಿದ್ದ ಮಾಲೀಕನ ಬಳಿ ತಲುಪಿಸಿ ಲಗುಬಗೆಯಿಂದ ನನ್ನ ಕಡೆ ಬಂದ. ಸಾಧಾರಣವಾಗಿ ನಾನು ದೊಡ್ಡ ಅಂಗಡಿಗಳಲ್ಲಿ ಮಾರಾಟಗಾರರನ್ನು ಸಾಧ್ಯವಾದಷ್ಟೂ ದೂರವಿಡುತ್ತೇನೆ. ಮುಖದ ಮೇಲೊಂದಿಷ್ಟು ಮಂದಹಾಸ, ಕೆಲಸದಲ್ಲಿ ಉತ್ಸಾಹ, ಒಳ್ಳೆಯ ನಡವಳಿಕೆ, ಅಂಗಡಿಯಲ್ಲಿರುವ ವಸ್ತುಗಳ ಬಗ್ಗೆ ತಿಳುವಳಿಕೆ ಇವಿಷ್ಟೂ ಇರುವ ಮಾರಾಟಗಾರರು ಸಿಗುವುದು ಅಪರೂಪ. ಆದರೆ ಈ ಹುಡುಗ ಅಂಥವನೊಬ್ಬನೆಂದು ನನಗೆ ಅನ್ನಿಸಿತು. ಮುಂದಿನ 5-10 ನಿಮಿಷಗಳಲ್ಲಿ ನಾನು ಒಂದು ಶೂ ಅನ್ನು ಆಯ್ಕೆ ಮಾಡುವುದಕ್ಕೆ ಹತ್ತಿರ ಬಂದಿದ್ದೆ. ಆಗ ಅಲ್ಲಿಗೆ ಇನ್ನೊಬ್ಬ ಗ್ರಾಹಕನ ಆಗಮನವಾಯಿತು.
ಗ್ರಾಹಕ ನೋಡುವುದಕ್ಕೆ ಸಭ್ಯನಂತಿದ್ದ. ಮಾರಾಟಗಾರ ತಕ್ಷಣ ತನ್ನ ಸೇವೆ ಮಾಡಬೇಕೆಂಬುದು ಅವನ ನಿರೀಕ್ಷೆಯಾಗಿತ್ತು. ಇದನ್ನರಿತ ಮಾರಾಟಗಾರ ತಕ್ಷಣ ಹೊಸ ಗ್ರಾಹಕನನ್ನು ನನ್ನ ಪಕ್ಕದಲ್ಲಿಯೇ ಕೂರಿಸಿ "ಏನು ಬೇಕು ಸಾರ್?" ಎಂದು ಮಾತು ಆರಂಭಿಸಿದ. ಅವನಿಗೆ ಅವನು ಧರಿಸಿ ಬಂದಿದ್ದ ತರಹದ್ದೇ ಚಪ್ಪಲಿ ಬೇರೆ ಅಳತೆಯಲ್ಲಿ ಬೇಕಿತ್ತು. ಆ ವಸ್ತು ಅಂಗಡಿಯಲ್ಲಿ ಲಭ್ಯವಿರುವುದು ನಿಜವಾಗಿತ್ತು. ಆದರೆ ಸಮಸ್ಯೆ ಆ ಗ್ರಾಹಕನ ವರ್ತನೆಯದ್ದಾಗಿತ್ತು. ಆತ ಮಾರಾಟಗಾರನನ್ನು ಏಕವಚನದಲ್ಲಿ ಸಂಬೋಧಿಸುವುದಕ್ಕೆ ಆರಂಭಿಸಿದ. ಕೆಲವರಿಗೆ ಅಂಗಡಿಯಲ್ಲಿನ ಮಾರಾಟಗಾರರನ್ನು ತಮ್ಮ ಸೇವಕರಂತೆ ಕಾಣುವ ಅಭ್ಯಾಸವಿರುತ್ತದೆ. ಆ ವರ್ಗಕ್ಕೆ ಸೇರಿದಂತೆ ಕಂಡ ಈ ವ್ಯಕ್ತಿ ಮಾತಾಡುವ ರೀತಿ ಕಂಡು ನನಗೆ ಆಶ್ಚರ್ಯವೂ ಬೇಸರವೂ ಆಯಿತು. ಆದರೆ ಮುಂದೆ ಈ ಕಥೆಗೊಂದು ತಿರುವು ಸಿಕ್ಕಿತು. "ಸಾರ್" ಎಂದು ಮಾತು ಆರಂಭಿಸಿದ್ದ ಮಾರಾಟಗಾರ ಒಂದೇ ನಿಮಿಷದಲ್ಲಿ "ಏನಣ್ಣಾ ನಿನಗೆ ಏನು ಬೇಕು?" ಗೆ ಬದಲಾಯಿಸಿದ್ದ. ಇದು ಆ ಗ್ರಾಹಕನಿಗೆ ಇಷ್ಟವಾಗುತ್ತಿಲ್ಲವೆಂಬುದು ಸ್ಪಷ್ಟವಾಗಿ ತೋರುತ್ತಿತ್ತು. ನಾನು ನನ್ನ ಶೂ ಆಯ್ಕೆ ಮುಗಿಸಿ ಕೆಳ ಮಹಡಿಗೆ ಬರುತ್ತಿದ್ದಂತೆ ಆ ಗ್ರಾಹಕನ ಖರೀದಿ ಸಫಲವಾಗುವುದಿಲ್ಲವೆಂದು ನನಗೆ ಅನಿಸುತ್ತಿತ್ತು. ನಾನು ಬಿಲ್ಲಿಂಗ್ ಮುಗಿಸಿ ಹೊರಡುವಷ್ಟರಲ್ಲಿಯೇ ಆ ಇನ್ನೊಬ್ಬ ಗ್ರಾಹಕ ದಡದಡನೆ ಕೆಳಗಿಳಿದು ಬಂದು ಬರಿಕೈಯಲ್ಲಿ ಹೊರಟೇ ಹೋದ. ಅವನ ಮುಖದಲ್ಲಿ ಸಿಟ್ಟು ಕಾಣುತ್ತಿತ್ತು.
ಅಂಗಡಿಯ ಮಾಲೀಕ ಎದುರಿಗೇ ಇದ್ದಿದ್ದರೆ ಆ ಮಾರಾಟಗಾರನ ವರ್ತನೆ ಬೇರೆ ರೀತಿ ಇರುತ್ತಿತ್ತೇನೊ? ಮೇಲಿನ ಮಹಡಿಯಲ್ಲಿ ನಡೆಯುವ ಮಾತುಕತೆ ಕೆಳಗಿನ ಮಹಡಿಗೆ ಕೇಳದಿರುವುದು ಆ ಮಾರಾಟಗಾರನಿಗೆ ತನ್ನ ಆತ್ಮಗೌರವವನ್ನು ಉಳಿಸಿಕೊಳ್ಳುವುದಕ್ಕೆ ಅವಕಾಶವನ್ನು ಕೊಟ್ಟಿತ್ತು ಮತ್ತು ಅವನು ಆ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡಿದ್ದ. ಇದ್ಯಾವುದರ ಅರಿವಿರದ ಮಾಲೀಕ ಹೊಸ ಗ್ರಾಹಕರ ನಿರೀಕ್ಷೆಯಲ್ಲಿ ಕುಳಿತಿದ್ದ. ಒಬ್ಬ ಗ್ರಾಹಕನಿಗೆ ಬೇಕಿರುವ ವಸ್ತುವು ಅಂಗಡಿಯಲ್ಲಿ ಇದ್ದೂ ಮಾರಾಟ ಸಫಲವಾಗುವುದು ನಿಶ್ಚಿತವಲ್ಲ ಎಂಬುದನ್ನು ಈ ಘಟನೆಯು ನನಗೆ ತೋರಿಸಿಕೊಟ್ಟಿತ್ತು.
Translation:
It was a Saturday. I was finishing tasks from my long-pending to-do list and as I saw a shoe shop, remembered that I had to buy a pair and entered the store.
The store was spread in 2 floors and the ground floor had nobody but the owner. As usual, the men's section was upstairs (you know why, right? ;-)). As I came upstairs, I saw a couple of customers and a lone sales boy (should I call them sales executives now?) I started looking at shoes by myself. Within 5-10 minutes the sales boy helped other customers finalize their purchases, took their stuff to the owner in ground floor and came running to me. I usually keep away the sales boys/girls in large stores as I find them to be nuisance rather than helpful. It is very rare to find a sales person who is knowledgeable about the products, behaves well, enthusiastic and has a smile on his/her face. However, this sales boy seemed to be one such. In the next 5-10 minutes I was about to finalize on my selection. That is when another customer entered the scene.
The new customer had dressed like a gentleman. He wanted the sales boy to serve him immediately. The sales boy understood this, sat him right next to me and asked him "What do you want, sir?" The customer's need was simple. He was looking for a pair of sandals exactly like what he was wearing, but in a different size. The store indeed had what he wanted, so it should have been a simple deal. However, the problem was of the customer's behavior. He addressed the sales boy in singular and abusive language. Some people have the habit of treating sales guys in stores, parking lot attendants, etc as their slaves. The customer seemed to belong to this category. I was surprised and sad to see the way he spoke to the sales boy. However, the story took a turn from then on. The sales boy immediately switched from "sir" to addressing the customer a language comparable to what the customer was using. It was obvious that this hurt the customer's ego and he surely did not like this. As I finalized my shoes and came down to ground floor for billing, I felt that the purchase of the other customer was not going to be successful. Indeed, as I finished billing, I saw the other customer come down the stairs huffing and walk out empty-handed. He was visibly angry.
Perhaps the sales boy would have behaved differently if the store owner was nearby when this happened. The conversation in 1st floor was not audible from the ground floor and this had given the sales boy an opportunity to maintain his self-respect, which he had used completely. The owner was oblivious to all this and continued to wait for customers. What I realized is: Even though the store has exactly what the customer needs, there is no guarantee that the sale will succeed.